Saturday, July 4, 2020

ಲಲಿತ ಪ್ರಬಂಧ ಸ್ಪರ್ಧೆಗಾಗಿ.
       "ಟು ಮಿನಿಟ್ಸ ಮ್ಯಾಗಿ"
     ಮ್ಯಾಗಿ ಅಂದ ತಕ್ಷಣ ಎರಡು
ವರ್ಷದ ಮಗುವಿನಿಂದ ಹಿಡಿದು
ನೂರು ವರ್ಷದ ಮುದುಕರ ವರೆಗೆ ಎಲ್ಲರೂ ಬಾಯಿಯಲ್ಲಿ ನೀರು ಸುರಿಸುವವರೇ. ಅದೇ
ಮ್ಯಾಗಿಯ ಕರಾಮತ್ತು.
     ಮೊದಲಿನ ಕಾಲದಲ್ಲಿ ಒಟ್ಟು ಕುಟುoಬದಲ್ಲಿ ಹೆಚ್ಚು ಜನರಿರು
ತ್ತಿದ್ದರು. ಚಿಯಾಂ ಪಿಯಾo ಅಂತ ಮನೆತುಂಬ ಮಕ್ಕಳೂ
ಇರುತಿದ್ದರು. ಮತ್ತೆ ಮನೆಗೆ ಬಂದು ಹೋಗುವ ಸಂಬಂಧಿ ಗಳು, ಸ್ನೇಹಿತರೂ ಇರುತ್ತಿದ್ದರು. ಹೀಗಾಗಿ ಅವಾಗ ಯಾವಾಗಲೂ
ಮನೆಯಲ್ಲಿ ಉಂಡಿ, ಅವಲಕ್ಕಿ
ಚೂಡಾ, ಕರಚಿಕಾಯಿ ಹೀಗೆ ತರಾವರಿ ತಿಂಡಿಗಳನ್ನು ತಯಾ ರಿಸಿ ಡಬ್ಬಿಯಲ್ಲಿ ತುಂಬಿ ತುಂಬಿ ಇಡುತ್ತಿದ್ದರು. 
      ಆದರೆ ಈಗ ಕಾಲ ಬದಲಾ ಗಿದೆ. ನಾವಿಬ್ಬರು, ನಮಗಿಬ್ಬರೇ
ಹೆಚ್ಚು ಎನ್ನುವಂತೆ ಒಡಕು ಕುಟುoಬಗಳಾಗಿವೆ. ಅಲ್ಲದೇ ಗಂಡ ಹೆಂಡತಿ ಇಬ್ಬರೂ ದುಡಿ
ಯಲು ಹೊರಗೆ ಹೋಗುವವರು
ಅಡಿಗೆ ಮಾಡುವದಕ್ಕೆ ಪುರ ಸೊತ್ತು ಇಲ್ಲದಾಗ ಈ ತಿಂಡಿಗಳು
ಬೇರೆ ಕೇಡು. ಮಾಡಲು, ತಿನ್ನಲು
ಕೂಡ ಸಮಯವಿಲ್ಲದಾಗಿದೆ.
ಇಂತಹ ಸುವರ್ಣಾವಕಾಶವನ್ನು
ಹುಡುಕಿಕೊಂಡು ಈಗ ಎರಡು ನಿಮಿಷದಲ್ಲಿ ತಯಾರಾಗುವ ಮ್ಯಾಗಿ ಮ್ಯಾಜಿಕನಂತೆ ಬಂದಿದೆ.
       ಮ್ಯಾಗಿ ಇದರ ಜನ್ಮಸ್ಥಳ ವಿದೇಶವಾಗಿದ್ದರೂ ಬೆಳೆಯುತ್ತಿ ರುವದು ನಮ್ಮ ದೇಶದಲ್ಲಿ. ಇದು
ತಾನು ಬರುವಾಗ ತನ್ನ ಜೊತೆಗೆ  ತನ್ನ ದೊಡ್ಡಪ್ಪ ಹಕ್ಕಾ ನ್ಯೂಡಲ್ಸ್,
ಅಣ್ಣನಾದ ಪಾಸ್ತಾ,  ಅಕ್ಕನಾದ ನ್ಯೂಡಲ್ಸ್ ಹೀಗೆ ತನ್ನ ಪರಿವಾರ ವನ್ನು ಕರೆದುಕೊಂಡು ಬoದಿದೆ.  ಫಾಸ್ಟ ಫುಡಗಳಲ್ಲಿ ಎಲ್ಲದರಕ್ಕಿ
Oತಲೂ ಮೊದಲು ವಿದೇಶ ದಿಂದ ಬಂದು ಎಲ್ಲರನ್ನೂ ತನ್ನೆಡೆಗೆ ಸಳೆದುಕೊಂಡಿದ್ದು
ಮೊದಲ ಫಾಸ್ಟಫುಡ್ ಎಂಬು ದರ ಹೆಮ್ಮೆ ಇದಕ್ಕಿದೆ. ವಿದೇಶ ದಲ್ಲಿ ಗಂಡಸರ ಹೆಸರು ಮ್ಯಾಗಿ, ಮ್ಯಾoಡಿ ಎಂತೆಲ್ಲ ಇರುತ್ತವೆ.
ಆದರೆ ಈ ಪ್ಯಾಕೇಟನಲ್ಲಿರುವ ಮ್ಯಾಗಿ ಗಂಡೋ, ಹೆಣ್ಣೋ ಗೊತ್ತಿಲ್ಲ. ಆದರೆ ತಿನ್ನಲು ರುಚಿ.
       ಮ್ಯಾಗಿ ಈಗಿನ ಗಡಿಬಿಡಿಯ    ಜಮಾನದಲ್ಲಿ ಒಂದು ವರದಾನ ವಾಗಿದೆ ಎಂದರೂ ತಪ್ಪಾಗಲಿ ಕ್ಕಿಲ್ಲ.
ಬೆಳಿಗ್ಗೆ ಆಫೀಸಿಗೆ ಹೋಗಲು ತಡವಾದಾಗ ಗಂಡ ತಿoಡಿ ರೆಡಿ ನಾ ಅಂತ ಕೇಳಿದಾಗ ಬೈಸಿ ಕೊಳ್ಳುವ ಮೊದಲೇ ಆಯಿ ತುರೀ ಎರಡೇ ನಿಮುಷ ಅಂತ 
ಮ್ಯಾಗಿ ಮಾಡಿ ಕೊಟ್ಟು ಅವರ ಅವರ ಕೆನ್ನೆಗೆ ಒಂದು ಮುತ್ತು ಕೊಟ್ಟರೆ ಸಾಕು ಅವರು ಆಫೀಸಿಗೆ ಹೋಗುವದನ್ನೇ ಮರೆಯುತ್ತಾರೆ. ಇದು ಮ್ಯಾಗಿಯ ಪ್ರಭಾವವೋ, ಮುದ್ದಿನ ಮತ್ತೊ ಅದು ಬೇರೆ ವಿಷಯ. 
     ಮಕ್ಕಳು ಸಾಯಂಕಾಲ ಶಾಲೆ
ಯಿಂದ ಮನೆಗೆ ಹಸಿದುಕೊಂಡು ಅಮ್ಮಾ ತಿಂಡಿ ಅಂತ ಬಂದಾಗ 
ತಾಯಿಗೆ ನೆನಪಾಗುವದು ಉಂಡಿ, ಚಕ್ಕಲಿಯಲ್ಲ, ಮ್ಯಾಗಿ ಅಥವಾ ಅದರ ಅಣ್ಣ ಪಾಸ್ತಾ. 
ಮಕ್ಕಳು ಬಟ್ಟೆ ಬದಲಿಸಿ, ಮುಖ
ತೊಳೆದುಕೊಂಡು ಬರುವಷ್ಟ ರಲ್ಲಿ ಡಾಯನಿoಗ ಟೇಬಲ್ ಮೇಲೆ ಬಿಸಿ ಬಿಸಿಯಾದ ಮ್ಯಾಗಿ ಯಾಗಲಿ, ಪಾಸ್ತಾ ಆಗಲೀ ಫಾಸ್ಟ ಫುಡ್ ರೆಡಿ. ಮಕ್ಕಳಿಗೆ ಸ್ವಲ್ಪು ತಲೆ ನೇವರಿಸಿ, ತಿನ್ನಲು ಕೊಟ್ಟರೆ ಸಾಕು ಅವರ ಖುಷಿಗೆ ಪಾರವೇ ಇಲ್ಲ.
      ಇನ್ನು ಅಪ್ಪಿತಪ್ಪಿ ಮನೆಯಲ್ಲಿ
ಯಾರಾದರೂ ವಯಸ್ಸಾದ ಅತ್ತೆ ಮಾವಂದಿರಿದ್ದರೆ ಅವರಿಗೂ ಕೂಡ  ಇದನ್ನೇ ಸ್ವಲ್ಪು ನಗು ಮುಖದಿಂದ ಕೊಟ್ಟಾಗ ಅವರ ಮುಖದಲ್ಲಿಯ ಧನ್ಯತಾ ಭಾವ
ವನ್ನು ಸೊಸೆ ಗಮನಿಸಿದರೆ ಅವಳು ಖಂಡಿತವಾಗಿಯೂ ಮ್ಯಾಗಿಗೆ  ಧನ್ಯವಾದಗಳನ್ನು 
ಹೇಳದೇ ಇರಲಾರಳು.  ಗಂಗಾ
ವತಿ ಪ್ರಾಣೇಶ ಅವರು ಹಾಸ್ಯ
ಮೂಲಕವಾಗಿ ಹೇಳುವಂತೆ 
' ಇದನ್ನು ತಿನ್ನಲು ಹಲ್ಲಿಗೆ ತ್ರಾಸಿಲ್ಲ, ನಾಲಿಗೆಗೂ ಕೆಲಸ ಇಲ್ಲ, ಬಾಯಿ ತಗದರ ಸಾಕು,
ಇದರಲ್ಲಿ ಎಷ್ಟು ಪ್ರೊಟೀನ್ ಇದೆಯೋ ಗೊತ್ತಿಲ್ಲ. ಪಚನ
ವಾಗತದನೋ ಇಲ್ಲ ಗೊತ್ತಿಲ್ಲ. ಮಳಿ ಹುಳದಂಗ ಇರ್ತೇತಿ ಸುಯo ಅಂತ ಒಳಗ ಹೋಗ 
ತೇತಿ, ಮತ್ತ ಮುಂಜಾಲೆ ಶೌಚ ದಾಗ ಪುಯo ಅಂತ ಹೊರಗ
ಬೀಳತೀತಿ' 
       ಹೆಂಡತಿ ಜಗಳವಾಡಿ ಅಡಿಗೆ
ಮಾಡದೆ ಇದ್ದಾಗ, ತವರು ಮನೆಗೆ ಹೋದಾಗ ಗಂಡಸ
ರಿಗೆ ಹೊಟ್ಟೆ ತುಂಬಿಸಿಕೊಳ್ಳಲು ಇದೇ ಅಪತ್ಭಾಂಧವ. ಇದನ್ನ ಮಾಡುವದಕ್ಕೂ  ತ್ರಾಸಿಲ್ಲ. ಗ್ಯಾಸ ಮೇಲೆ ಅಳತೆಯ ಪ್ರಕಾರ
ನೀರು ಬಿಸಿ ಇಟ್ಟು, ಅದು ಬಿಸಿ ಯಾದ ತಕ್ಷಣ ಮ್ಯಾಗಿಯನ್ನು ಮುರಿದು ತುಂಡು ಮಾಡಿ (ಇಲ್ಲ
ದಿದ್ದರೆ ಸರಿಯಾಗಿ ಬೇಯುವ ದಿಲ್ಲ) ಬಿಸಿ ನೀರಿನಲ್ಲಿ ಹಾಕಿ 2
ನಿಮಿಷ ಬೇಯಿಸಿ, ನಂತರ ಅದ ರಲ್ಲಿ ಅದರ ಮಸಾಲೆಯನ್ನು ಹಾಕಿ ಕೈಯಾಡಿಸಿದರೆ ಸಾಕು.
ಬಾಯಿ ಚಪ್ಪರಿಸಿ ತಿನ್ನುತ್ತೇವೆ.
ಇದು ಮಾತ್ರ ಸತ್ಯ. 
      ನಡುವೆ ಕೆಲವು ದಿವಸಗಳ ಹಿಂದೆ ಮ್ಯಾಗಿಯಲ್ಲಿ ರಾಸಾ ಯನಿಕ ದ್ರವ್ಯಗಳಿವೆ. ಅದು ಆರೋಗ್ಯಕ್ಕೆ ಹಾನಿಕಾರಕ ಅಂತ
ಮ್ಯಾಗಿ ತಯಾರಿಕೆಯನ್ನು ಬಹಿ ಷ್ಕರಿಸಿದ್ದರು. ಅದಕ್ಕಾಗಿ ತಯಾ ರಿಸಿಟ್ಟ ಟನ್ನಗಟ್ಟಲೆ ಮ್ಯಾಗಿಯ ನ್ನು ಚೆಲ್ಲಿದರು. ಅದರಿಂದ ಮ್ಯಾಗಿ ತಯಾರಿಕರಿಗೆ ತುಂಬಾ ನಷ್ಟ ವಾಯಿತು. ಎಷ್ಟೊಂದು ಜನರು ನಿರುದ್ಯೋಗಿಗಳಾದರು. ಇದರಿಂದ ವಾಣಿಜ್ಯಕ್ಕೂಹೊಡೆತ ಬಿದ್ದಿತು.  ಆದರೆ ಈಗ ಮತ್ತೆ ಮ್ಯಾಗಿ ಚಾಲ್ತಿಗೆ ಬಂದಿದೆ. ತಯಾರಕರೂ ಖುಷ, ಕೊoಡು ಕೊಳ್ಳುವವರೂ ಖುಷ. 
        ಈ ಮ್ಯಾಗಿ ಬಂದು ನಾವು ಹೇಳುವ 'ಎರಡು ನಿಮಿಷ 'ದ ಸ್ವಾತಂತ್ರ್ಯವನ್ನೂ ನಮ್ಮಿಂದ ಕಸಿದುಕೊಂಡಿದೆ. ಬಹಳ ಆಯಾಸವಾದಾಗ ಎರಡು ನಿಮಿಷ ಮಲಗಿದರೆ ಸಾಕು. ಅಂತೇವೆ. ಯಾರಾದರೂ ಕರೆ ದರೆ ಎರಡೇ ನಿಮಿಷ ಬರ್ತೀನಿ ಅಂತಿವಿ, ನನ್ನ ಸ್ನಾನ ಏನು ಬಿಡು ಎರಡೇ ನಿಮಿಷ ಸಾಕು ಅಂತಿವಿ. ಈಗ ಆ ಎರಡು ನಿಮಿಷ ಎನ್ನುವದನ್ನೂ ಕೂಡ ವಿದೇಶದಿಂದ ಬಂದ ಈ ಮ್ಯಾಗಿ
ನಮ್ಮಿಂದ ಕಸೆದುಗೊಂಡಿದೆ ಅಂತ ಅನಸೋಲ್ವಾ ನಿಮಗೆ. ನೋಡಿ ಹೇಗಿದೆ ಈ ಮ್ಯಾಗಿಯ ಚಮಕ್ಕು.
         ಒಟ್ಟಿನಲ್ಲಿ ಹೇಳುವದಾ
ದರೆ ಮ್ಯಾಗಿಯಲ್ಲಿ ಎನಿರಲಿ, ಬಿಡಲಿ, ಮಕ್ಕಳಿಗೆ ಬೇರೆ ಪೌಷ್ಟಿಕ
ವಾದ ಏನೇ ತಿಂಡಿ ಕೊಟ್ಟರೂ ಯಾಕೆ ಮ್ಯಾಗಿ ಇಲ್ಲವಾ ಅಂತ ಮುಖ ಸೊಟ್ಟು ಮಾಡಿಕೊಂಡು
ತಿನ್ನುತ್ತಾರೆ. ಗಂಡಸರು ಆಫೀಸ್ 
ನಿಂದ ಮನೆಗೆ ಬಂದ ಕೂಡಲೇ
ನನಗೆ ಬಹಳ ಕೆಲಸವಿದೆ. ಬೇಗನೆ ಎರಡು ನಿಮಿಷದಲ್ಲಿ ಮ್ಯಾಗಿ ಮಾಡಿ ಕೊಡು ಅಂತಾರೆ
ಮೊದಲೇ ಮಹಿಳೆಯರು ಕಛೇರಿಯಲ್ಲಿ ಕೆಲಸ ಮಾಡಿ ಸುಸ್ತಾಗಿ ಏನಪ್ಪಾ ಸಾಯಂಕಾಲ ತಿಂಡಿ ಮಾಡೋದು ಅಂತ ವಿಚಾರ ಮಾಡುತ್ತ ಬ್ರತಿರ್ತಾರೆ. ಆಗ ಮಕ್ಕಳು ಗಂಡ ಮ್ಯಾಗಿ ಸಾಕು ಅಂದಾಗ 'ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯರು ಹೇಳಿದ್ದೂ ಹಾಲು ಅನ್ನ' ಅನ್ನುವ ಗಾದೆಯಂತೆ ಬದುಕಿದೆಯಾ ಬಡ ಜೀವ
ಅಂತ ಸಮಾಧಾನದ ಉಸಿರು ಬಿಡುತ್ತಾರೆ. 
       ನೋಡಿ ವಿದೇಶದಿಂದ ಬಂದು ನಮ್ಮೆಲ್ಲರನ್ನೂ ಆಳು ತ್ತಿರುವ ಮ್ಯಾಗಿ ಎಂಬ ಫಾಸ್ಟ ಫುಡ್ ನ ನಜಾಕತ್ತು.
ರಚನೆ: 
ಡಾ. ಸರೋಜಿನಿ.ಭದ್ರಾಪೂರ.
ಪುಣೆ. (ಮಹಾರಾಷ್ಟ್ರ).
ಜಂಗಮವಾಣಿ: 9480325033
Gmail: sarojinibhadrapur
@ mail. com

No comments:

Post a Comment

Featured Post

हिंदी पखवाड़े पर इंदौर संघ लेखिकाओ के पसंदीदा पुस्तकों पर विचार

एक सच्चा रिश्ता एक अच्छी किताब की तराहा होता है,  कितनी भी पुरानी हो जाए, फिर भी शब्द नहीं बदलते, रास्ते बहुत मिलेंगे भटकाने के लिए, लेकिन स...